MODEL QUESTION BANK OF LESSON BASED ASSESSMENT

(These Questions are only for model)

Lesson Based Assessment 

Class - 6

Sub. - Kannada (Second Language)

ಗದ್ಯ - ೯: ಎದೆಗುಂದದ ಧೀರರು

        2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಪಾಠ ಆಧಾರಿತ ಮೌಲ್ಯಾಂಕನವನ್ನು (Lesson Based Assessment) ಅಳವಡಿಸುವ ಸಂಬಂಧ ರಾಜ್ಯ ಪಠ್ಯಕ್ರಮದ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕೆಯನ್ನು ಸಾಧಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಲು ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನು ಸಿದ್ಧಪಡಿಸಿ DSERT Website ನಲ್ಲಿ ಅಳವಡಿಸಲಾಗಿದೆ. ಸದರಿ ಸಾಮಗ್ರಿಯನ್ನು ಕಲಿಕಾ ಪ್ರಕ್ರಿಯೆಯಿಂದ ಮೌಲ್ಯಾಂಕನ ಪ್ರಕ್ರಿಯೆಯವರೆಗೆ ಎಲ್ಲಾ ಹಂತದಲ್ಲೂ ನಿರಂತರವಾಗಿ ಬಳಸುವುದು ಅತ್ಯವಶ್ಯಕವಾಗಿದೆ.

1. ಪಾಠ ಆಧಾರಿತ ಮೌಲ್ಯಾಂಕನದ (LBA) ಉದ್ದೇಶಗಳು:

    ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಿಕೊಳ್ಳುವುದು.

    ವಿದ್ಯಾರ್ಥಿಗಳ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವುದು.

    ಮಕ್ಕಳ ಪ್ರಗತಿಯನ್ನು ಗುರುತಿಸುವಲ್ಲಿ ಪರೀಕ್ಷಾ ಅವಲಂಬನೆಯನ್ನು ಕಡಿಮೆ ಮಾಡಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು.

    ನಿರಂತರ ವಿಶ್ಲೇಷಣೆಯಿಂದ ನಿಗದಿತ ಕಲಿಕಾ ಫಲಗಳ ಗಳಿಕೆಗೆ ಅವಕಾಶ ನೀಡುವುದು.

    ವಿವಿಧ ಕಲಿಕಾ ಹಂತದ ವಿದ್ಯಾರ್ಥಿಗಳ ಕಲಿಕೆಗೆ ಹಾಗೂ Inclusive Assessment ಗೆ ಪ್ರೇರಣೆ ನೀಡುವುದು.

    ಶಿಕ್ಷಕರ ಮೌಲ್ಯಮಾಪನ ಸಾಮರ್ಥ್ಯವನ್ನು ಹೆಚ್ಚಿಸುವುದು. (ಮೌಖಿಕ, ಪ್ರಾಯೋಗಿಕ, ಸಹವರ್ತಿ ಮೌಲ್ಯಮಾಪನ ಯೋಜನೆಗಳು, Portfolio, ಸ್ವ-ಮೌಲ್ಯಮಾಪನ ಇತ್ಯಾದಿ...)

    ವಿದ್ಯಾರ್ಥಿಗಳ ಕಲಿಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು.

ಪ್ರತಿ ಹಂತದ ವಿದ್ಯಾರ್ಥಿಯ ಕಲಿಕೆಯನ್ನು ಪೋಷಕರ ಗಮನಕ್ಕೆ ತರುವುದು.

    ಪಾಠ ಆಧಾರಿತ ಮೌಲ್ಯಾಂಕನ ಚೌಕಟ್ಟು, ಸಾಂಪ್ರದಾಯಿಕ ಪರೀಕ್ಷಾ ಕೇಂದ್ರಿತ ಮೌಲ್ಯಮಾಪನದಿಂದ ದೈನಂದಿನ ತರಗತಿ ಕಲಿಕಾ ಪ್ರಕ್ರಿಯೆಯೊಂದಿಗೆ ಸಂಯೋಜಿತವಾದ    ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ (CCE) ಪೂರಕವಾಗಿಸುವುದು.

ಎದೆಗುಂದದ ಧೀರರು - ಪ್ರಶ್ನಕೋಠಿ

ಪಾಠ ಆಧಾರಿತ ಮೌಲ್ಯಮಾಪನ ಮಾದರಿ ಪ್ರಶ್ನಕೋಠಿ

ತರಗತಿ - 6 | ವಿಷಯ - ಕನ್ನಡ (SL) | ಗದ್ಯ - ೯: ಎದೆಗುಂದದ ಧೀರರು

(These questions are only for practice as model question bank for Lesson Based Assessment)

ಕಲಿಕಾಫಲಗಳು (Learning Outcomes)

  • 1. ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಧೈರ್ಯದಿಂದ ಎದುರಿಸುವ ಮಹತ್ವ ತಿಳಿಯುವುದು.
  • 2. ಜೂಲಿಯೋ ಇಗ್ಲೆಶಿಯಸ್ ಮತ್ತು ಮಾಲತಿ ಹೊಳ್ಳ ಅವರ ಸಾಧನೆಗಳಿಂದ ಸ್ಫೂರ್ತಿ ಪಡೆಯುವುದು.
  • 3. ವೈಫಲ್ಯ ಬಂದಾಗ ನಿರಾಶೆಗೊಳ್ಳದೆ ಹೊಸ ದಾರಿ ಕಂಡುಕೊಳ್ಳುವ ಸಾಮರ್ಥ್ಯ ಬೆಳೆಸುವುದು.
  • 4. 'ಪರಿಣತಿ', 'ಸ್ಫೂರ್ತಿ', 'ದಾದಿ', 'ವಿಫಲತೆ' ಮುಂತಾದ ಹೊಸ ಪದಗಳ ಅರ್ಥಗಳನ್ನು ತಿಳಿಯುವುದು.
  • 5. ಪಾಠದಲ್ಲಿರುವ ವ್ಯಾಕರಣಾಂಶಗಳು ಮತ್ತು ಭಾಷಾ ಪ್ರಯೋಗಗಳನ್ನು ತಿಳಿದು ಅಭ್ಯಾಸ ಮಾಡುವುದು.
  • 6. ಮಾತೃ ಫೌಂಡೇಶನ್‌ನಂತಹ ಸೇವಾ ಕಾರ್ಯಗಳ ಬಗ್ಗೆ ತಿಳಿದು ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಳ್ಳುವುದು.

ವಿಭಾಗ - ಅ: ಒಂದು ಪದ/ವಾಕ್ಯದಲ್ಲಿ ಉತ್ತರಿಸಿ (10 ಪ್ರಶ್ನೆಗಳು)

೧. ಜೂಲಿಯೋ ಇಗ್ಲೆಶಿಯಸ್ ಯಾವ ದೇಶದ ಬಾಲಕ?

ಉತ್ತರ: ಸ್ಪೇನ್.

೨. ಜೂಲಿಯೋ ಯಾವ ಕ್ಲಬ್ ಸೇರಿದ್ದನು?

ಉತ್ತರ: 'ರಿಯಲ್ ಮ್ಯಾಡ್ರಿಡ್ ಕ್ಲಬ್'.

೩. ಜೂಲಿಯೋ ಯಾವ ಆಟದಲ್ಲಿ ಖ್ಯಾತಿ ಪಡೆದಿದ್ದನು?

ಉತ್ತರ: ಫುಟ್‌ಬಾಲ್.

೪. ಜೂಲಿಯೋ ಅಪಘಾತಕ್ಕೆ ಒಳಗಾದ ವರ್ಷ ಯಾವುದು?

ಉತ್ತರ: ೧೯೬೩.

೫. ಜೂಲಿಯೋಗೆ ಗಿಟಾರ್ ತಂದುಕೊಟ್ಟವರು ಯಾರು?

ಉತ್ತರ: ದಾದಿಯೊಬ್ಬಳು (ಸೇವಕಿ).

೬. ಮಾಲತಿ ಹೊಳ್ಳ ಅವರ ಊರು ಯಾವ ಜಿಲ್ಲೆಯಲ್ಲಿದೆ?

ಉತ್ತರ: ಉಡುಪಿ ಜಿಲ್ಲೆ.

೭. ಮಾಲತಿ ಹೊಳ್ಳ ಅವರಿಗೆ ಬಾಲ್ಯದಲ್ಲೇ ತಗುಲಿದ ರೋಗ ಯಾವುದು?

ಉತ್ತರ: ಪೋಲಿಯೋ.

೮. ಮಾಲತಿ ಅವರು ಕ್ರೀಡಾಕೂಟಗಳಲ್ಲಿ ಯಾವುದರ ಮೂಲಕ ಓಡುತ್ತಿದ್ದರು?

ಉತ್ತರ: ಗಾಲಿಕುರ್ಚಿ (ವೀಲ್ ಚೇರ್).

೯. ಮಾಲತಿ ಹೊಳ್ಳ ಅವರಿಗೆ ಯಾವ ಪ್ರಶಸ್ತಿಯು ೨೦೦೧ ರಲ್ಲಿ ಲಭಿಸಿತು?

ಉತ್ತರ: ಪದ್ಮಶ್ರೀ ಪ್ರಶಸ್ತಿ.

೧೦. ಮಾಲತಿ ಅವರು ವಿಕಲಚೇತನರಿಗಾಗಿ ಸ್ಥಾಪಿಸಿದ ಸೇವಾ ಸಂಸ್ಥೆ ಯಾವುದು?

ಉತ್ತರ: 'ಮಾತೃ ಫೌಂಡೇಶನ್'.

ವಿಭಾಗ - ಆ: ಬಿಟ್ಟ ಸ್ಥಳಗಳನ್ನು ತುಂಬಿರಿ (10 ಪ್ರಶ್ನೆಗಳು)

೧೧. ಜೀವನದಲ್ಲಿ ಎಂತಹ ತೊಂದರೆಗಳು ಬಂದರೂ __________ ಧೈರ್ಯದಿಂದ ಮುನ್ನುಗ್ಗಬೇಕು.

ಉತ್ತರ: ಎದೆಗುಂದದೆ

೧೨. ಜೂಲಿಯೋ ತನ್ನ ಇಪ್ಪತ್ತನೆಯ ವಯಸ್ಸಿಗೆ ಉತ್ತಮ __________ ಎಂಬ ಖ್ಯಾತಿ ಪಡೆದನು.

ಉತ್ತರ: ಗೋಲ್ ಕೀಪರ್

೧೩. ಅಪಘಾತದಿಂದ ಜೂಲಿಯೋವಿನ __________ ಕೆಳಭಾಗ ಸಂಪೂರ್ಣ ಶಕ್ತಿಯನ್ನು ಕಳೆದುಕೊಂಡಿತು.

ಉತ್ತರ: ಸೊಂಟದ

೧೪. ಜೂಲಿಯೋ ಆಸ್ಪತ್ರೆಯಲ್ಲಿ ನೋವು ಮರೆಯಲು ಹಾಡುಗಳನ್ನು ಬರೆದು _________ ತೊಡಗಿದ.

ಉತ್ತರ: ಹಾಡ

೧೫. ಜೂಲಿಯೋ ಹೊರತಂದ ಆಲ್ಬಂಗಳಲ್ಲಿ "ಜೀವನ ಹೀಗೆ __________" ಎಂಬ ಹೆಸರಿನ ಹಾಡುಗಳು ಇದ್ದವು.

ಉತ್ತರ: ಸಾಗುತ್ತಿದೆ

೧೬. ಪೋಲಿಯೋದಿಂದ ಮಾಲತಿ ಅವರ ಕಾಲುಗಳು __________ ಆದವು.

ಉತ್ತರ: ಶಕ್ತಿಹೀನ

೧೭. ದೇಹದ ನರಗಳೆಲ್ಲ ಚೆಂಡಿನಂತೆ ಒಂದುಗೂಡುವುದು ಮಾಲತಿ ಅವರ ಕಾಯಿಲೆಯ __________.

ಉತ್ತರ: ಸ್ವರೂಪ

೧೮. ಪ್ರತಿ ಆರು ತಿಂಗಳಿಗೊಮ್ಮೆ ಮಾಲತಿಗೆ __________ ಆಗುತಿತ್ತು.

ಉತ್ತರ: ಶಸ್ತ್ರಚಿಕಿತ್ಸೆ

೧೯. ಮಾಲತಿ ಹೊಳ್ಳ ಡಾ. ರಾಜ್ ಕುಮಾರ್ ಅವರೊಡನೆ __________ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ.

ಉತ್ತರ: ಕಾಮನಬಿಲ್ಲು

೨೦. ಕೀಳರಿಮೆಗಿಂತ ಮಿಗಿಲಾದ __________ ಇಲ್ಲ ಎಂದು ಮಾಲತಿ ಹೇಳಿದ್ದಾರೆ.

ಉತ್ತರ: ಅಂಗವೈಕಲ್ಯ

ವಿಭಾಗ - ಇ: ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ (MCQs) (10 ಪ್ರಶ್ನೆಗಳು)

೨೧. ಸುಧಾಚಂದ್ರನ್ ಅವರಿಗೆ ಜನಪ್ರಿಯತೆ ತಂದುಕೊಟ್ಟ ನೃತ್ಯ ಯಾವುದು?

(ಅ) ಭರತನಾಟ್ಯ (ಬ) ಯಕ್ಷಗಾನ (ಕ) ಮಯೂರಿ ನೃತ್ಯ (ಡ) ಕಥಕ್

ಉತ್ತರ: (ಕ) ಮಯೂರಿ ನೃತ್ಯ

೨೨. ಜೂಲಿಯೋ ಆಸ್ಪತ್ರೆಯಲ್ಲಿ ಎಷ್ಟು ತಿಂಗಳು ಕಳೆದನು?

(ಅ) ೧೦ ತಿಂಗಳು (ಬ) ೨೦ ತಿಂಗಳು (ಕ) ೧೮ ತಿಂಗಳು (ಡ) ೩೦ ತಿಂಗಳು

ಉತ್ತರ: (ಕ) ೧೮ ತಿಂಗಳು

೨೩. 'ಅದೃಷ್ಟದ ಒಂದು ಬಾಗಿಲು ಮುಚ್ಚಿದರೆ ಇನ್ನೊಂದು ದಾರಿ ತೆರೆದುಕೊಳ್ಳುತ್ತದೆ' ಎಂದು ಹೇಳಿದವರು ಯಾರು?

(ಅ) ಮಾಲತಿ ಹೊಳ್ಳ (ಬ) ಜೂಲಿಯೋ (ಕ) ಸುಧಾಚಂದ್ರನ್ (ಡ) ಮಾಲಿ

ಉತ್ತರ: (ಬ) ಜೂಲಿಯೋ

೨೪. ಮಾಲತಿ ಹೊಳ್ಳರ ತಾಯಿ ಯಾರು?

(ಅ) ಸುಂದರರಾಜ (ಬ) ಜೂಲಿಯಾ (ಕ) ಪದ್ಮಾವತಿ (ಡ) ಮಾಲತಿ

ಉತ್ತರ: (ಕ) ಪದ್ಮಾವತಿ

೨೫. ಮಾಲತಿ ಬಾಲ್ಯದ ಬಹುಭಾಗವನ್ನು ಎಲ್ಲೆಲ್ಲಿ ಕಳೆದರು?

(ಅ) ಬೆಂಗಳೂರು (ಬ) ಮುಂಬೈ (ಕ) ಚೆನ್ನೈ ಪುನರ್ವಸತಿ ಕೇಂದ್ರ (ಡ) ಉಡುಪಿ

ಉತ್ತರ: (ಕ) ಚೆನ್ನೈ ಪುನರ್ವಸತಿ ಕೇಂದ್ರ

೨೬. ಮಾಲತಿ ಹೊಳ್ಳ ಅವರು ಕೆಲಸ ಮಾಡುತ್ತಿದ್ದ ಬ್ಯಾಂಕ್ ಯಾವುದು?

(ಅ) ಕೆನರಾ ಬ್ಯಾಂಕ್ (ಬ) ಸಿಂಡಿಕೇಟ್ ಬ್ಯಾಂಕ್ (ಕ) ವಿಜಯಾ ಬ್ಯಾಂಕ್ (ಡ) ಎಸ್‌ಬಿಐ

ಉತ್ತರ: (ಬ) ಸಿಂಡಿಕೇಟ್ ಬ್ಯಾಂಕ್

೨೭. ಅನಿವಾರ್ಯ ಪದದ ಅರ್ಥ

(ಅ) ಆಯ್ಕೆ ಮಾಡಬಹುದಾದ (ಬ) ತಪ್ಪಿಸಲಾಗದ (ಕ) ನಿಲ್ಲಿಸಬಹುದಾದ (ಡ) ಮರೆಯಬಹುದಾದ

ಉತ್ತರ: (ಬ) ತಪ್ಪಿಸಲಾಗದ

೨೮. ಮಾಲತಿ ಅವರಿಗೆ 'ಅರ್ಜುನ ಪ್ರಶಸ್ತಿ' ಲಭಿಸಿದ ವರ್ಷ?

(ಅ) ೧೯೯೦ (ಬ) ೨೦೦೧ (ಕ) ೧೯೯೫ (ಡ) ೨೦೧೦

ಉತ್ತರ: (ಕ) ೧೯೯೫

೨೯. 'ದಾದಿ' ಪದದ ಸರಿಯಾದ ಅರ್ಥವೇನು?

(ಅ) ವೈದ್ಯ (ಬ) ಶಿಕ್ಷಕ (ಕ) ಸೇವಕಿ (ಡ) ತಾಯಿ

ಉತ್ತರ: (ಕ) ಸೇವಕಿ

೩೦. 'ಸ್ಫೂರ್ತಿ' ಪದದ ಅರ್ಥ

(ಅ) ಕೋಪ (ಬ) ಪ್ರೇರಣೆ (ಕ) ಸೋಲು (ಡ) ಸೋಮಾರಿತನ

ಉತ್ತರ: (ಬ) ಪ್ರೇರಣೆ

ವಿಭಾಗ - ಈ: ವ್ಯಾಕರಣಾಂಶಗಳು (Grammar) (20 ಪ್ರಶ್ನೆಗಳು)

೧. ವಿರುದ್ಧಾರ್ಥಕ ಪದಗಳನ್ನು ಬರೆಯಿರಿ: (10 ಪ್ರಶ್ನೆಗಳು)

೩೧. ಧೈರ್ಯ X

ಉತ್ತರ: ಅಧೈರ್ಯ/ಭಯ

೩೨. ಕಷ್ಟ X

ಉತ್ತರ: ಸುಖ

೩೩. ಯಶಸ್ಸು X

ಉತ್ತರ: ಅಪಯಶಸ್ಸು/ವಿಫಲತೆ

೩೪. ಆಸೆ X

ಉತ್ತರ: ನಿರಾಸೆ

೩೫. ಕೀರ್ತಿ X

ಉತ್ತರ: ಅಪಕೀರ್ತಿ

೩೬. ಖ್ಯಾತಿ X

ಉತ್ತರ: ಕುಖ್ಯಾತಿ/ಅಖ್ಯಾತಿ

೩೭. ಸ್ವಾವಲಂಬನೆ X

ಉತ್ತರ: ಪರಾವಲಂಬನೆ

೩೮. ದುರದೃಷ್ಟ X

ಉತ್ತರ: ಅದೃಷ್ಟ

೩೯. ಪುರುಷ X

ಉತ್ತರ: ಮಹಿಳೆ

೪೦. ವಿಶೇಷ X

ಉತ್ತರ: ಸಾಮಾನ್ಯ

೨. ಬಿಡಿಸಿ ಬರೆಯಿರಿ: (5 ಪ್ರಶ್ನೆಗಳು)

೪೧. ವಿಶ್ವಾದ್ಯಂತ =

ಉತ್ತರ: ವಿಶ್ವ + ಆದ್ಯಂತ

೪೨. ಕೋಟ್ಯಂತರ =

ಉತ್ತರ: ಕೋಟಿ + ಅಂತರ

೪೩. ನೂರಾಯಿತು =

ಉತ್ತರ: ನೂರು + ಆಯಿತು

೪೪. ಮುಟ್ಟಿರಲಿಲ್ಲ =

ಉತ್ತರ: ಮುಟ್ಟಿ + ಇರಲಿಲ್ಲ

೪೫. ತಿಂಗಳಿಗೊಮ್ಮೆ =

ಉತ್ತರ: ತಿಂಗಳಿಗೆ + ಒಮ್ಮೆ

೩. ವ್ಯಾಕರಣ ಶುದ್ಧ ಪದವನ್ನು ಗುರುತಿಸಿ: (5 ಪ್ರಶ್ನೆಗಳು)

೪೬. (ಅ) ಚಿಕಿತ್ಸೆ (ಬ) ಚಿಕಿತ್ಶೆ

ಉತ್ತರ: (ಅ) ಚಿಕಿತ್ಸೆ

೪೭. (ಅ) ಪ್ರಭಂಧ (ಬ) ಪ್ರಬಂಧ

ಉತ್ತರ: (ಬ) ಪ್ರಬಂಧ

೪೮. (ಅ) ಸಿದ್ಧಾಂತ (ಬ) ಸಿದ್ಧಂತ

ಉತ್ತರ: (ಅ) ಸಿದ್ಧಾಂತ

೪೯. (ಅ) ವಿಜಿಯಿ (ಬ) ವಿಜಯಿ

ಉತ್ತರ: (ಬ) ವಿಜಯಿ

೫೦. (ಅ) ಅಮೇರಿಕಾ (ಬ) ಅಮೆರಿಕಾ

ಉತ್ತರ: (ಬ) ಅಮೆರಿಕಾ

ಈ ಪ್ರಶ್ನೆಗಳು ಅಭ್ಯಾಸಕ್ಕಾಗಿ ಮಾತ್ರ.

Download Question Bank PDF

Post a Comment

أحدث أقدم