Tip - These questions are not given by DSERT these are only for practice
CLASS -7
SUBJECT - KANNADA SECOND LANGUAGE
SYLLABUS - KARNATAKA STATE
MODEL QUESTION PAPER FOR LESSON BASED ASSESSMENT
ONLY FOR PRACTICE
ಪಾಠ - ೩ ಭರತ ಭೂಮಿ ನನ್ನ ತಾಯಿ (ಪದ್ಯ)
ಪಾಠ ಆಧಾರಿತ ಮೌಲ್ಯಾಂಕನ
ಮಾದರಿ ಪ್ರಶ್ನಕೋಠಿ
ತರಗತಿ - 7 ವಿಷಯ - ಕನ್ನಡ (SL)
ಪಾಠ - ೩ ಭರತ ಭೂಮಿ ನನ್ನ ತಾಯಿ (ಪದ್ಯ)
ಕವಿ ಪರಿಚಯ ಮತ್ತು ಪಾಠದ ಸಾರಾಂಶ
ಈ ಕವಿತೆಯನ್ನು ರಾಷ್ಟ್ರಕವಿ ಕುವೆಂಪು ಅವರು ಬರೆದಿದ್ದಾರೆ. ಕವಿ ಹೇಳುವಂತೆ, ಹೆತ್ತತಾಯಿ ಮತ್ತು ನಮ್ಮನ್ನು ಹೊತ್ತಿರುವ ಜನ್ಮಭೂಮಿ ಎರಡೂ ಸ್ವರ್ಗಕ್ಕಿಂತಲೂ ಶ್ರೇಷ್ಠವಾಗಿವೆ. ಜನ್ಮಭೂಮಿ ನಮ್ಮನ್ನು ಪೋಷಿಸಿ, ಗಾಳಿ, ನೀರು, ಬೆಳಕು ಮತ್ತು ಆಹಾರವನ್ನು ನೀಡುತ್ತದೆ. ಆದ್ದರಿಂದ ನಾವೆಲ್ಲರೂ ಈ ತಾಯಿಯ ಮಕ್ಕಳಂತೆ ಒಗ್ಗಟ್ಟಿನಿಂದ ಬಾಳಬೇಕು ಎಂದು ಕವಿ ತಿಳಿಸಿದ್ದಾರೆ. ಕುವೆಂಪು ಅವರು ಭರತ ಭೂಮಿಯ ಹಿಮಗಿರಿ, ಸಮುದ್ರ, ಹಸಿರು ಹೊಲಗಳು ಮತ್ತು ಪುಣ್ಯ ನದಿಗಳ ಸೌಂದರ್ಯವನ್ನು ಮನೋಹರವಾಗಿ ವರ್ಣಿಸಿದ್ದಾರೆ. ಭಾರತೀಯರಾದ ನಾವು ಜಾತಿ, ಭಾಷಾ ಭೇದಗಳನ್ನು ಬಿಟ್ಟು ದೇಶದ ಏಳಿಗೆಗಾಗಿ ನಮ್ಮ ಜೀವನವನ್ನೇ ಅರ್ಪಿಸಬೇಕು ಎಂಬುದು ಈ ಕವಿತೆಯ ಮುಖ್ಯ ಆಶಯವಾಗಿದೆ.
ಬಹು ಆಯ್ಕೆ ಪ್ರಶ್ನೆಗಳು (MCQs)
1. ಕವಿಗೆ ಭರತ ಭೂಮಿ ಏನಾಗಿದೆ?
Easy2. ಭಾರತ ಭೂಮಿ ಕವಿಯನ್ನು ಹೇಗೆ ಪೊರೆಯುತ್ತದೆ?
Easy3. ಕವಿ ತನ್ನ ಜೀವನವನ್ನು ಏನನ್ನು ಕಟ್ಟಲು ದೇವಿಗೆ ಎರೆಯುವೆ ಎನ್ನುತ್ತಾರೆ?
Average4. ಕುವೆಂಪು ಅವರು ಭಾರತ ಭೂಮಿಯ ಮುಡಿಗೆ ಏನಿದೆ ಎನ್ನುತ್ತಾರೆ?
Easy5. ಭಾರತದ ಅಡಿಯನ್ನು ತೊಳೆಯುವಂತದ್ದು ಯಾವುದು?
Average6. ಪದ್ಯದಲ್ಲಿರುವ 'ಪೈರು ಪಚ್ಚೆ ಪಸುರಿನುಡೆ' ಈ ಪದಗಳ ಅರ್ಥವೇನು?
Average7. ಯಾವ ನದಿಗಳು ಪುಣ್ಯರಂಗೆ ಎಂದು ಕರೆಯಲ್ಪಟ್ಟಿವೆ?
Easy8. ಕವಿ ಏನನ್ನು ಮರೆವೆ ಎನ್ನುತ್ತಾರೆ?
Average9. ಕವಿ ಏನನ್ನು ತೊರೆವೆ ಎನ್ನುತ್ತಾರೆ?
Average10. ಕವಿ ಯಾವುದರ ಸ್ವರ್ಗಕ್ಕೆ ಏರಲು ಪುಣ್ಯದೇಣಿ ಮೆಟ್ಟಲು ಬಯಸುತ್ತಾರೆ?
Difficultಬಿಟ್ಟ ಸ್ಥಳಗಳನ್ನು ಭರ್ತಿ ಮಾಡಿ (Fill in the blanks)
11. ಭರತ ಭೂಮಿ ನನ್ನ ತಾಯಿ ನನ್ನ _________.
Easy12. ಜೀವನವನೆ ದೇವಿಗೆರೆವೆ ಬಿಡುತೆ _________ ಕಟ್ಟಲು.
Easy13. ತುಹಿನ ಗಿರಿಯ _________ ಮುಡಿಯ ಹಿರಿಯ.
Average14. ಪೈರು ಪಚ್ಚೆ _________.
Easy15. ಸಿಂಧು, ಯಮುನೆ, ದೇವಗಂಗೆ, _________, ಕೃಷ್ಣ, ಭದ್ರೆ, ತುಂಗೆ.
Average16. ಸಲಿಲ ತೀರ್ಥ _________.
Average17. ಮತದ _________ಗಳನ್ನು ತೊರೆವೆ.
Easy18. ನುಡಿಗಳೊಡಕುಗಳನ್ನು _________.
Easy19. ತೊತ್ತ ತೊಡಕುಗಳನು _________.
Difficult20. ಸ್ವಾತಂತ್ರ್ಯದ ಸ್ವರ್ಗಕೇರೆ ಪುಣ್ಯದೇಣಿ _________.
Averageಪದ್ಯದ ಸಾಲುಗಳನ್ನು ಪೂರ್ಣಗೊಳಿಸಿ (Complete the lines of the poem)
21. ಭರತ ಭೂಮಿ ನನ್ನ ತಾಯಿ
ನನ್ನ ಪೊರೆವ ತೊಟ್ಟಿಲು...
22. ತುಹಿನ ಗಿರಿಯ ಸಿರಿಯ ಮುಡಿಯ
ಹಿರಿಯ ಕಡಲು ತೊಳೆಯುವಡಿಯ...
23. ಸಿಂಧು, ಯಮುನೆ, ದೇವಗಂಗೆ
ತಪತಿ, ಕೃಷ್ಣ, ಭದ್ರೆ, ತುಂಗೆ...
24. ಮತದ ಬಿರುಕುಗಳನ್ನು ತೊರೆವೆ
ನುಡಿಗಳೊಡಕುಗಳನ್ನು ಮರೆವೆ...
25. ಸ್ವಾತಂತ್ರ್ಯದ ಸ್ವರ್ಗಕೇರೆ
ಪುಣ್ಯದೇಣಿ ಮೆಟ್ಟಲು!
ಅತಿ ಚಿಕ್ಕ ಉತ್ತರ ಪ್ರಶ್ನೆಗಳು (1 ಅಂಕ)
26. ಕವಿ ಭರತ ದೇಶವನ್ನು ಏನೆಂದು ಬಣ್ಣಿಸಿದ್ದಾರೆ?
Easy27. ಭಾರತ ದೇಶದ ಸಿರಿಮುಡಿ ಯಾವುದು?
Easy28. ಕವಿ ಗಂಗಾ ನದಿಯನ್ನು ಏನೆಂದು ಕರೆದಿದ್ದಾರೆ?
Average29. ಕವಿ ತನ್ನ ಜೀವನವನ್ನು ಯಾರಿಗೆ ಅರ್ಪಿಸುವೆ ಎನ್ನುತ್ತಾರೆ?
Average30. ಕುವೆಂಪು ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?
Difficultಉತ್ತರ ಪ್ರಶ್ನೆಗಳು (2-3 ವಾಕ್ಯಗಳು)
31. ಕುವೆಂಪು ಅವರು ಭಾರತದ ಪ್ರಾಕೃತಿಕ ಸಿರಿಯನ್ನು ಹೇಗೆ ವರ್ಣಿಸಿದ್ದಾರೆ?
Average32. ನಮ್ಮ ಭಾರತ ದೇಶದಲ್ಲಿ ಹರಿಯುವ ಪ್ರಮುಖ ನದಿಗಳಾವುವು?
Easy33. ಮತದ ಬಿರುಕುಗಳನ್ನು ಏಕೆ ತೊರೆಯಬೇಕು?
Difficult34. 'ಜೀವನವನೆ ದೇವಿಗೆರೆವೆ ಬಿಡುತೆ ಗುಡಿಯ ಕಟ್ಟಲು' ಇದರ ಅರ್ಥವೇನು?
Difficult35. ಕುವೆಂಪು ಅವರ ಇತರ ಕೃತಿಗಳಾವುವು?
Averageವ್ಯಾಕರಣ ಮತ್ತು ಪದಜ್ಞಾನ
36. 'ಕಡಲು' ಪದಕ್ಕೆ ಸಮಾನಾರ್ಥಕ ಪದ ಬರೆಯಿರಿ.
Easy37. 'ತಾಯಿ' ಪದಕ್ಕೆ ಸಮಾನಾರ್ಥಕ ಪದ ಬರೆಯಿರಿ.
Easy38. 'ನುಡಿ' ಪದಕ್ಕೆ ಸಮಾನಾರ್ಥಕ ಪದ ಬರೆಯಿರಿ.
Average39. 'ಪಾಪ' ಪದಕ್ಕೆ ವಿರುದ್ಧಾರ್ಥಕ ಪದ ಬರೆಯಿರಿ.
Easy40. 'ಸ್ವಾತಂತ್ರ್ಯ' ಪದಕ್ಕೆ ವಿರುದ್ಧಾರ್ಥಕ ಪದ ಬರೆಯಿರಿ.
Average41. 'ಹಿರಿಯ' ಪದಕ್ಕೆ ವಿರುದ್ಧಾರ್ಥಕ ಪದ ಬರೆಯಿರಿ.
Easy42. 'ದೇವಿಗೆರೆವೆ' ಪದವನ್ನು ಬಿಡಿಸಿ ಬರೆಯಿರಿ.
Difficult43. 'ತೊಳೆಯುವಡಿಯ' ಪದವನ್ನು ಬಿಡಿಸಿ ಬರೆಯಿರಿ.
Difficult44. 'ಸ್ವರ್ಗಕೇರಿ' ಪದವನ್ನು ಬಿಡಿಸಿ ಬರೆಯಿರಿ.
Difficult45. ಪದ್ಯದಲ್ಲಿರುವ ಎರಡು ಪ್ರಾಸಪದಗಳನ್ನು ಬರೆಯಿರಿ.
Averageಉತ್ತರಗಳು
- 1. c) ನನ್ನ ತಾಯಿ
- 2. d) ತೊಟ್ಟಿಲಿನಂತೆ
- 3. b) ಗುಡಿಯನ್ನು
- 4. c) ತುಹಿನ ಗಿರಿ
- 5. a) ಕಡಲು
- 6. b) ಹಚ್ಚ ಹಸಿರಿನ ಹೊಲಗಳು
- 7. a) ಸಿಂಧು, ಯಮುನೆ, ದೇವಗಂಗೆ
- 8. b) ನುಡಿಗಳೊಡಕುಗಳನ್ನು
- 9. b) ಮತದ ಬಿರುಕುಗಳನ್ನು
- 10. c) ಸ್ವಾತಂತ್ರ್ಯದ
- 11. ಪೊರೆವ ತೊಟ್ಟಿಲು
- 12. ಗುಡಿಯ
- 13. ಸಿರಿಯ
- 14. ಪಸುರಿನುಡೆ
- 15. ತಪತಿ
- 16. ಪುಣ್ಯರಂಗೆ
- 17. ಬಿರುಕು
- 18. ಮರೆವೆ
- 19. ಬಿರಿವೆ
- 20. ಮೆಟ್ಟಲು
- 21. ಜೀವನವನೆ ದೇವಿಗೆರೆವೆ ಬಿಡುತೆ ಗುಡಿಯ ಕಟ್ಟಲು
- 22. ಪೈರು ಪಚ್ಚೆ ಪಸುರಿನುಡೆಯ
- 23. ಸಲಿಲ ತೀರ್ಥ ಪುಣ್ಯರಂಗೆ
- 24. ತೊತ್ತ ತೊಡಕುಗಳನು ಬಿರಿವೆ.
- 25. ಪುಣ್ಯದೇಣಿ ಮೆಟ್ಟಲು!
- 26. ಕವಿ ಕುವೆಂಪು ಅವರು ಭರತ ದೇಶವನ್ನು 'ನನ್ನ ತಾಯಿ' ಎಂದು ಬಣ್ಣಿಸಿದ್ದಾರೆ.
- 27. ಭಾರತ ದೇಶದ ಸಿರಿಮುಡಿ ಹಿಮಗಿರಿ (ಹಿಮಾಲಯ).
- 28. ಕವಿ ಗಂಗಾ ನದಿಯನ್ನು 'ದೇವಗಂಗೆ' ಎಂದು ಕರೆದಿದ್ದಾರೆ.
- 29. ಕವಿ ತನ್ನ ಜೀವನವನ್ನು ಭರತ ದೇವಿಗೆ ಅರ್ಪಿಸುವೆ ಎನ್ನುತ್ತಾರೆ.
- 30. ಕುವೆಂಪು ಅವರ 'ಶ್ರೀ ರಾಮಾಯಣ ದರ್ಶನಂ' ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.
- 31. ಕುವೆಂಪು ಅವರು ಹಿಮದ ಗಿರಿಗಳು (ಹಿಮಾಲಯ) ಭಾರತದ ಮುಡಿ, ಸಮುದ್ರವು ಪಾದ, ಮತ್ತು ಹಸಿರು ಹೊಲಗಳು ಬಟ್ಟೆಯಂತೆ ಇವೆ ಎಂದು ವರ್ಣಿಸಿದ್ದಾರೆ.
- 32. ಪದ್ಯದಲ್ಲಿ ಉಲ್ಲೇಖಿಸಲಾದ ಪ್ರಮುಖ ನದಿಗಳು ಸಿಂಧು, ಯಮುನೆ, ದೇವಗಂಗೆ, ತಪತಿ, ಕೃಷ್ಣ, ಭದ್ರೆ, ಮತ್ತು ತುಂಗೆ.
- 33. ನಾವೆಲ್ಲರೂ ಒಂದೇ ತಾಯಿಯ ಮಕ್ಕಳಾಗಿದ್ದು, ಜಾತಿ ಮತ್ತು ಧರ್ಮಗಳ ಆಧಾರದ ಮೇಲೆ ನಾವು ವಿಭಜನೆಗೊಳ್ಳಬಾರದು. ದೇಶದ ಏಳಿಗೆಗಾಗಿ ಮತದ ಬಿರುಕುಗಳನ್ನು ತೊರೆಯಬೇಕು.
- 34. ಈ ಸಾಲು ಎಂದರೆ ದೇಶದ ಏಳಿಗೆ ಮತ್ತು ಸ್ವಾತಂತ್ರ್ಯಕ್ಕಾಗಿ ಗುಡಿಯಂತೆ ಶ್ರಮಿಸಲು ನಮ್ಮ ಜೀವನವನ್ನೇ ದೇವಿಗೆ ಅರ್ಪಿಸುವೆ ಎಂದು ಕವಿ ಹೇಳುತ್ತಾರೆ.
- 35. ಕುವೆಂಪು ಅವರ ಇತರ ಕೃತಿಗಳು 'ಚಂದ್ರಮಂಚಕೆ ಬಾ ಚಕೋರಿ', 'ನವಿಲು', 'ಬೆರಳ್‌ಗೆ ಕೊರಳ್', 'ಕಾನೂರು ಹೆಗ್ಗಡತಿ' ಮತ್ತು 'ಮಲೆಗಳಲ್ಲಿ ಮದುಮಗಳು'.
- 36. ಸಮುದ್ರ
- 37. ಅಮ್ಮ
- 38. ಮಾತು, ಭಾಷೆ
- 39. ಪುಣ್ಯ
- 40. ಪಾರತಂತ್ರ
- 41. ಕಿರಿಯ
- 42. ದೇವಿಗೆ + ಎರವೆ
- 43. ತೊಳೆಯುವ + ಅಡಿಯ
- 44. ಸ್ವರ್ಗಕ್ಕೆ + ಏರೆ
- 45. ಉದಾ: ತೊಟ್ಟಿಲು - ಕಟ್ಟಲು, ಮುಡಿಯ - ಅಡಿಯ, ತುಂಗೆ - ಪುಣ್ಯರಂಗೆ.
إرسال تعليق